ಅಡಿಕೆ ಖೇಣಿಗೆ ಹಣಹಾಕಿದ ವೃದ್ದೆಗೆ ವಂಚಿಸಿರುವ ಘಟನೆ ವರದಿಯಾಗಿದೆ. ಅಡಿಕೆಗೆ 45 ಲಕ್ಷ ರೂ. ಹಣ ಹಾಕಿಸಿ ವಾಪಾಸ್ ನೀಡದೆ ಇರುವ ಕುರಿತು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊಳೆಹೊನ್ನೂರಿನ ಬಳಿಯಿರುವ ಬಿ.ಬೀರನಹಳ್ಳಿಯ ಅಡಿಕೆ ತೋಟದ ಕೋಯ್ಲಿಗೆ 45 ಲಕ್ಷ ರೂ. ಹಣವನ್ನ ಭದ್ರಾವತಿ ತಾಲೂಕು ನಂಜಾವೂರಿನ ರವಿ ಕುಮಾರ್ ಮತ್ತು ಆತನ ಪತ್ನಿ ಪಡೆದು ವಾಪಾಸ್ ನೀಡದೆ ಇದ್ದು 2021 ರಲ್ಲಿ 9 ಹಂತದಲ್ಲಿ ಹಣಪಡೆದುರುವುದಾಗಿ ವೃದ್ಧೆ ವಿಜಯಲಕ್ಷ್ಮೀ ದೂರು ದಾಖಲಿಸಿದ್ದಾರೆ.
ಇದಾದನಂತರ ಅಡಿಕೆ ಕೋಯ್ಲು ಮಾಡಿಕೊಂಡು ಹೋದ ರವಿಕುಮಾರ್ ದಂಪತಿಗಳು ಹಣದ ರಶೀದಿ ನೀಡುತ್ತಾರೆ ವಿನಃ ಹಣ ನೀಡಿರುವುದಿಲ್ಲ. ಈ ಹಣವನ್ನಕೇಳಿದ್ದಕ್ಕೆ ಚೆಕ್ ನೀಡಿರುವ ದಂಪತಿಗಳು ನೀಡಿರುವ 8 ಚೆಕ್ ಗಳು ಬೌನ್ಸ್ ಆಗಿವೆ. ಇಬ್ಬರನ್ನೂ ಕರೆದು ಮನೆಯಲ್ಲಿ ವಿಚಾರಿಸಿದಾಗ ನಮ್ಮ ಬಳಿ ಹಣ ಹಣವಿಲ್ಲ ಎಂದು ವೃದ್ಧೆಯ ಮೇಲೆ ರೇಗಿದ್ದಾರೆ.
ವೃದ್ಧೆಯ ಮಾನಭಂಗಕ್ಕೂ ಯತ್ನಿಸಿರುವ ಘಟನೆ ನಡೆದಿದೆ ಎಂದು ದೂರು ದಾಖಲಾಗಿದೆ. ವಿಜಯಲಕ್ಷ್ಮೀ ಎಂಬುವರು ಈ ದೂರನ್ನ ದಾಖಲಿಸಿದ್ದಾರೆ.

Post a Comment