ಬನ್ನಿಮುಡಿಯುವ ಮೂಲಕ ಸಂಪನ್ನಗೊಂಡ ದಸರಾ 2025- Dasara 2025, enriched by bunny-wearing
ನಮ್ಮೂರ ನಾಡ ಹಬ್ಬ ಶಿವಮೊಗ್ಗ ದಸರಾ 2025 ಸಂಪನ್ನಗೊಂಡಿದೆ. ಅಂಬು ಛೇದನ-ಬನ್ನಿ ಮುಡಿಯುವುದರೊಂದಿಗೆ ಮುಕ್ತಾಯಗೊಂಡಿದೆ.
ಸಂಪ್ರದಾಯದಂತೆ ಶಿವಮೊಗ್ಗ ತಹಸೀಲ್ದಾರ್ ರಾಜೀವ್ ಅಂಬು ಛೇದಿಸಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದೊಂದಿಗೆ 10 ದಿನ ದಸರಾಕ್ಕೆ ತೆರೆ ಬಿದ್ದಿದೆ. ಎತ್ತರದ ವೇದಿಕೆಯಲ್ಲಿ ಸಾವಿರಾರು ಜನರ ಉಪಸ್ಥಿತಿಯಲ್ಲಿ ಅಂಬುಕಡಿಯಲಾಗಿದೆ.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ದೇವರು ಫ್ರೂಡಂಪಾರ್ಕ್ ಗೆ ಬರುತ್ತಿದ್ದಂತೆ ಅಂಬು ಛೇದಿಸಲಾಗಿದೆ. ಅಂಬು ಕಡಿಯುತ್ತಿದ್ದಂತೆ ತಕ್ಷಣವೇ ವೇದಿಕೆಯತ್ತ ಜನತೆ ನುಗ್ಗಿ ಅಂಬು ಪ್ರಸಾದ ಪಡೆಯಲು ನೂಕು ನುಗ್ಗಲು ಮಾಡಿದ್ದಾರೆ. ಈ ದೃಶ್ಯ ಯಾವಾಗಲೂ ಮಾಮೂಲಿಯಾಗಿರುತ್ತದೆ.
ಜೈಕಾರ ಕೂಗುತ್ತಾ ಬನ್ನಿಗಾಗಿ ಜನ ವೇದಿಜೆಗೆ ನುಗ್ಗಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಎಂಎಲ್ಸಿ ಬಲ್ಕಿಷ್ ಬಾನು ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದರು.ನಾಡದೇವಿ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಹೊತ್ತು ಫ್ರೀಡಂ ಪಾರ್ಕ್ ಗೆ ಸಾಗರ್ ಆನೆ ಆಗಮಿಸುತ್ತಿದ್ದಂತೆ ನಾಡದೇವಿಯನ್ನು ಹಿಂಬಾಲಿಸಿಕೊಂಡು ನಗರದ ವಿವಿಧ ದೇವಾಲಯದ ಉತ್ಸವ ಮೂರ್ತಿಗಳು ಸಾಗಿ ಬಂದಿವೆ.
ಝಗಮಗಿಸುವ ವಿದ್ಯುತ್ ದೀಪಾಲಂಕಾರದೊಂದಿಗೆ ದೇವತೆಗಳ ಮೆರವಣಿಗೆ ಕಂಗೊಳಿಸಿವೆ. ಅಂಬು ಕಟಿಯುತ್ತಿದ್ದಂತೆ ಮತ್ತೊಂದೆಡೆ ರಾವಣನ ಪ್ರಕೃತಿಯನ್ನ ಪಟಾಕಿಯಿಂದ ಧಗಧಗ ಹೊತ್ತಿ ಉರಿಸಲಾಗಿದೆ. ಸಾವಿರಾರು ಜನರು ಸಂಭ್ರಮದ ಕ್ಷಣವನ್ನ ಕಣ್ತುಂಬಿಸಿಕೊಂಡಿದ್ದಾರೆ
ಬನ್ನಿ ಮುಡಿದು ಒಳ್ಳೆಯದನ್ನು ಹರಸುವಂತೆ ನೆರೆದಿದ ಜನರು ಪ್ರಾರ್ಥಿಸಿದ್ದಾರೆ. ಪರಸ್ಪರ ಬನ್ನಿ ಹಂಚಿಕೊಂಡು ಬನ್ನಿ ಮುಡಿದು ಬಾಳು ಬಂಗಾರವಾಗಲಿ ಎಂದು ಹಾರೈಸಿಕೊಂಡಿದ್ದಾರೆ.

Post a Comment