ಆರಂಭಗೊಂಡ ಜಂಬೂ ಮೆರವಣಿಗೆ- Jamboo procession begins

 ಆರಂಭಗೊಂಡ ಜಂಬೂ ಮೆರವಣಿಗೆ-  Jamboo procession begins


ಶಿವಮೊಗ್ಗದ ದಸರಾ‌ ಉತ್ಸವಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ತೆರಬೀಳಲಿದ್ದು, ಈ ಹಿನ್ನಲೆಯಲ್ಲಿ ಇಂದು ಕೋಟೆ ಬಡಾವಣೆಯಲ್ಲಿರುವ ಅರಮನೆಯ ಮುಂಭಾಗದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿ ಆರಂಭವಾಗಿದೆ. ಸವಾರಿಯ ಹಿಂಭಾಗದಲ್ಲಿಯೇ ದೇವತೆಗಳ ಮೆರವಣಿಗೆ ಸಾಗಿದೆ. ಸಾಗರ, ಬಹದ್ದೂರ್ ಮತ್ತು ಬಾಲಣ್ಣ ಎಂಬ ಮೂರು ಆನೆಗಳು ಮೆರವಣಿಗೆಯಲ್ಲಿದ್ದು, ಸಾಗರ್ ಚಾಮುಂಡಿ ತಾಯಿಯ ಬೆಳ್ಳಿ ವಿಗ್ರಹವನ್ನ ಹೊತ್ತು ಸಾಗಿದೆ.‌

ಸಚಿವ ಮಧು ಬಂಗಾರಪ್ಪ, ಶಾಸಕ ಚೆನ್ನಬಸಪ್ಪ, ಎಂಎಲ್ ಸಿ ಬಲ್ಕಿಸ್ ಭಾನು, ಸೂಡಾ ಅಧ್ಯಕ್ಷ ಹೆಚ್ ಸಿ ಸುಂದರೇಶ್,  ಹೆಚ್ ಸಿ ಯೋಗೀಶ್, ನಿಗಮ ಮಂಡಳಿ ಅಧ್ಯಕ್ಷೆ ಜಿ.ಪಲ್ಲವಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ನೂತನ ಮಹಿಳೆ ಅಧ್ಯಕ್ಷೆ ಶ್ವೆತಾ ಬಂಡಿ, ಎಸ್ಪಿ ಮಿಥುನ್ ಕುಮಾರ್, ಮೊದಲಾದವರು ನಂದಿ ಪೂಜೆಯಲ್ಲಿ ಭಾಗಿಯಾಗಿದ್ದರು. ಕೋಟೆ ಆಂಜನೇಯ ದೇವಸ್ಥಾನದ ಅರ್ಚಕ ರಾಮ್ ಪ್ರಸಾದ್ ಮೂಲಕ ನಂದಿ ಧ್ವಜದ ಪೂಜೆ ನಡೆದಿದೆ. 


ನಂತರ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಕಟ್ಟೆಯ ಮೇಲೆ ನಿಂತು ಸಚಿವರು, ಶಾಸಕರು ಅಂಬಾರಿಗೆ ಹೂವಿನ ಸುರಿಮಳೆ ಗೈದಿದ್ದಾರೆ. ನಂತರ ಮೆರವಣಿಗೆ ಮಾರಿಕಾಂಬ ದೇವಸ್ಥಾನ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಎಎ ವೃತ್ತ, ನೆಹರೂ ರಸ್ತೆ ದುರ್ಗಿಗುಡಿ, ಜೈಲ್ ವೃತ್ತ, ಜೈಲ್ ರಸ್ತೆ ಮೂಲಕ ಫ್ರೀಡಂಪಾರ್ಕ್ ಗೆ ಅಂಬಾರಿ ಮೆರವಣಿಗೆ ತಲುಪಲಿದೆ. 

ಫ್ರೀಡಂಪಾರ್ಕ್ ನಲ್ಲಿ ತಹಶೀಲ್ದಾರ್ ರಾಜೀವ್ ಅವರಿಂದ ಅಂಬು ಕಡಿಯಲಾಗುವ ಮೂಲಕ 10 ದಿನ ವೈಭವದ ದಸರಾ ಹಬ್ಬ ಸಂಪನ್ನಗೊಳ್ಳಲಿದೆ. ಇಲ್ಲಿ ರಾವಣನ ಮೂರ್ತಿಗೆ ಬಾಣ ಬಿಡುವ ಮೂಲಕ ಪಟಾಕಿ ಸಿಡಿಸಲಾಗುವುದು. ಹೀಗೆ 2025 ನೇ ಸಾಲಿನ ದಸರಾ ಹಬ್ಬಕ್ಕೆ ತೆರಬೀಳಲಿದೆ. 

Post a Comment

أحدث أقدم